Wednesday, November 30, 2011

ಬಲಿ


                                    

                 ಮನೆ. ಅಪ್ಪ ಮನೆಯಲ್ಲಿರಲಿಲ್ಲ. ಒಂಥರಾ ಅದಕ್ಕೆ ತಣ್ಣಗಿತ್ತು ಎನಬಹುದೆನೋ. ಎಂದೂ ಅಪ್ಪನ ರೂಮಿಗೆ ಕಾಲಿಡದಿದ್ದವನು ಅಂದು ಹೊಕ್ಕಿದ್ದೆ. ಪ್ರಳಯಕ್ಕೊಂದು ಮುನ್ನುಡಿ ಬರೆಯಲೆಂಬಂತೆ.  ಆತನ ರೂಮಿನಲ್ಲಿ ಹಳೆಯ ಬೆತ್ತದ ಕುಚಿ9 ಮತ್ತು ಬೆತ್ತದ ಮೇಜೊಂದಿತ್ತು. ಅದೇ ಮೇಜಿನ ಮೇಲೆ ಆತ ಮುದ್ದಾಗಿ ಬರೆದ ಚೀಟಿ ಕಾಣಿಸಿತು. ನಿಜವಾಗಿಯೂ ಆತನ ಅಕ್ಷರ ಮುದ್ದಾಗಿತ್ತು. ಆದರೆ ಬರೆದ ವಾಕ್ಯ ಮಾತ್ರ  ಜೀಣಿ9ಸಿಕೊಳ್ಳಲು ಕಷ್ಟವಿತ್ತು.
ಇದೇ ಶುಕ್ರವಾರ ನಿನಗೆ ಕೊನೆಯ ದಿನ
ವಿಚಿತ್ರವಾಗಿ ಕಂಡಿತು ನನಗೆ.
            ಮನೆಯ ಪಾಲಿಗೆ ನಿಷ್ಪ್ರಯೋಜಕ ಅಪ್ಪ ಊರ ಜನರ ಪಾಲಿಗೆ ಉದ್ಧಾತವಾದಿ. ಬಾಯ್ತೆರೆದರೆ ಸಂಸ್ಕ್ರತ ಶ್ಲೋಕ.. ಎಂತಹ ನಿಷ್ಪ್ರಯೋಜಕನೆನಿಸಿದ್ದರೂ ಆತ ಕಟುಕನೆನಿಸಿರಲಿಲ್ಲ.
ಆದರೆ ಈಗ?
ಎಲ್ಲ ಒಗಟ ಒಗಟಾಗಿ ಕಾಣಿಸತೊಡಗಿತ್ತು.
ನಿಧಾನ ಸ್ಪಷ್ಟವಾಗತೊಡಗಿತು.
ಆಕೆಯೇ ಇರಬೇಕು?
ಆಕೆಯಾ…?
ಆತನಾ…?
ಹುಟ್ಟಿಸಿದ ಮಗಳನ್ನೆ ಕೊಂದು ಬಿಡುವಂತಹ ಮಟ್ಟಕ್ಕೆ ಬೆಳೆದುಬಿಟ್ಟನಾ ಆತ…?
ಇರಲಿಕ್ಕಿಲ್ಲ ಆತನೇ ಇರಬೇಕು..
ಬಲಿ ”…
ಪಕ್ಕದಲ್ಲೇ ಮತ್ತೊಂದು ಹಾಳೆಯಿತ್ತು.
ಆಕೆ ಸಾಯಬೇಕು
ಇಲ್ಲಇಲ್ಲ. ಬಲಿ ಅವನಲ್ಲ.
ಆಕೆಯೇ.
ಸ್ಪಷ್ಟವಾಗಿತ್ತು ನನಗೆ.
ಹಾಗಾದರೆ ಪ್ರೀತಿಸಿದವರು ಭೂಮಿಯಲ್ಲಿ ಬದುಕಬಾರದಷ್ಟು ದೊಡ್ಡ ತಪ್ಪಿತಸ್ಥರಾ?
ಹೌದು,
ಅಕೆ ಪ್ರೀತಿಸುತ್ತದ್ದಳು. ಆಕೆ ನನ್ನ ಒಡಹುಟ್ಟಿದವಳು,
ತಂಗಿ... ಅನಸೂಯ.
             ಅಂತಹ ಬೇಜವಬ್ದಾರಿ ಅಪ್ಪನನ್ನೂ ಆಕೆ ಪ್ರೀತಿಸುತ್ತಿದ್ದಳು, ಗೌರವಿಸುತ್ತಿದ್ದಳು. ಅದರೆ ಅಪ್ಪನ ಕಣ್ಣಿಗೆ ಆಕೆಯು ಪಕ್ಕದ  ಓಣಿಯ ಆನಂದನು ಪರಸ್ಪರ ಪ್ರೀತಿಸುತ್ತಿದ್ದದ್ದು ಭೂಮಿಯ ಮೇಲೆ ಉಳಿಯುವ ಅಹ9ತೆಯನ್ನೇ ಕಳೆದುಕೊಂಡಂತಹ ತಪ್ಪಾಗಿತ್ತು.
           ನಮ್ಮ ಮನೆಯಲ್ಲಿ ನಾವೇ ನಾಲ್ಕು ಜನ ಅಪ್ಪ ಅಮ್ಮ, ನಾನು ತಂಗಿ.. ಸಂಸಾರ ಚೆನ್ನಾಗಿರುತ್ತಿತ್ತೆನೋ ಎಲ್ಲಾ ಗಂಡಸರಂತೆ ನನ್ನಪ್ಪನೂ ದುಡಿದು ಹಾಕಿ, ಅಮ್ಮ ಮನೆ ನಡೆಸಿದ್ದರೆ...
ಆದರೆ ಹಾಗಾಗಲಿಲ್ಲ.
          ಅಪ್ಪ ಬೇಜವಬ್ದಾರಿ ಮನುಷ್ಯ. ಅಮ್ಮನಿಗೆ ತುತ್ತಿನ ಚೀಲ ತುಂಬಲೇಬೇಕಾದ ಅನಿವಾಯ9ತೆ. ಆಕೆಯೆ ದುಡಿಯತೊಡಗಿದಳು. ಇದ್ದ ಅಲ್ಪ-ಸ್ವಲ್ಪ ಹೊಲದಲ್ಲಿ. ಸ್ವಲ್ಪ ಬೆಳೆಯುತ್ತಿದ್ದಂತೆ ನಾನೂ ಅನಿವಾಯ9ವಾಗಿ ಆಕೆಯ ಜೊತೆ ಹೋಗಬೇಕಾಯಿತು, ಶಾಲೆಗೆ ಬೆನ್ನು ಹಾಕಿ. ಅದರೆ ತಂಗಿಯನ್ನು ಓದಿಸಿ ದೊಡ್ಡಾಕೆಯನ್ನಾಗಿ ಮಾಡಬೇಕೆನ್ನುವುದು ಅಮ್ಮನ ದೊಡ್ಡ ಕನಸಾಗಿತ್ತು  ಆದರೆ ಆಕೆ ಪ್ರೀತಿಯಲ್ಲಿ ಬಿದ್ದುಬಿಟ್ಟಳು. ಆಕೆ ದಿನವೂ ಕಾಲೇಜಿಗೆ ಬಸ್ಸಿನಲ್ಲೇ ಹೋಗಬೇಕಾಗಿತ್ತು. ಚಿಕ್ಕಂದಿನಿಂದಲೂ ಪರಿಚಯದ ಆನಂದ, ಒಂದೆರಡು ಸಲ ಮನೆಗೂ ಬಂದಿದ್ದ. ಅದು ಇದು ಎಂದು.
        
             ನಿಧಾನವಾಗಿ ನಾಗರೀಕತೆಗೆ ತೆರೆದುಕೊಲ್ಳುತ್ತಿತ್ತು ನಮ್ಮೂರು. ಮೊದಮೊದಲು ಯಾರು ಬಗ್ಗೆ ಆಲೋಚಿಸಿರಲಿಲ್ಲ. ಆದರೆ ದಿನಕಳೆದಂತೆ ಗುಸುಗುಸು ಪಿಸಪಿಸ ಶುರುವಾಗಿತ್ತು. ಅಮ್ಮ ಈಕೆಯ ವಯಸ್ಸಿನ  ಅಕ್ಕ ಪಕ್ಕದ ಮಕ್ಕಳಿಗೆಲ್ಲ ಮದುವೆಯಾದರೂ ಮದುವೆಯ ಬಗ್ಗೆ ಚಿಂತಿಸಿರಲಿಲ್ಲ. ಆಕೆಯ ಕಣಲ್ಲಿ ಕೇವಲ ಓದಿನ ಕನಸಿತ್ತು. ಆದರೆ ಹಳಿ ತಪ್ಪುತ್ತಿರುವುದನ್ನು ತಿಳಿದು ಕಸಿವಿಸಿಗೊಂಡಳು. ಕನಸು ಮರೆತಳು. ತರಾತುರಿಯಲ್ಲಿ ಮಗಳ ಮದುವೆ ಮಾಡಿ ಕೈತೊಳೆದುಕೊಳ್ಳಬೇಕೆಂದು ಹವಣಿಸಿದಳು. ಅವರಿವರನ್ನು ಕಾಡಿ ಒಂದು ಹುಡುಗನ್ನು ಗೊತ್ತು ಮಾಡಿದಳು. ಆತ ತಕ್ಕ ಮಟ್ಟಿಗೆ ಸ್ಥಿತಿವಂತನೇ ಇದ್ದ. ಪದವಿ ಮುಗಿಸಿದ್ದ. ನಮ್ಮೂರಿನಿಂದ ಎಂಟು-ಹತ್ತು ಕಿಲೋಮೀಟರ್ ದೂರದವನು. ಊರಿನ ಮದ್ಯದಲ್ಲಿ ಅವನದೊಂದು ಅಂಗಡಿಯಿತ್ತು. ತಾಯಿ ಇರಲಿಲ್ಲ ತಂದೆ ಮಗ ಮಾತ್ರ.
        ನನಗೆ ಬುದ್ದಿ ಬಂದಾಗಿಂದಲೂ ಅಪ್ಪನೆದುರು ಅಳದಿದ್ದ ಅಮ್ಮ ನಿನ್ನೆ ಅತ್ತಿದ್ದಳು. ಕಾರಣ ಮಗಳು ಮದುವೆಯಾಗಲಾರೆ ಎಂದು ಹಠಹಿಡಿದಿದ್ದಳು. ಆಕೆಯ ಹಠದ ಮುಂದೆ ಅಮ್ಮನ ಕೋಪ, ರೌದ್ರಾವತಾರ ಕೊನೆಗೆ ಕಣ್ಣೀರು ಸೋತು ಹೋಗಿತ್ತು. ಕಣ್ಣೀರು ಮರೆತಿದಿದ್ದ ಅಮ್ಮ ಅಂದು ಅಪ್ಪನ ಮುಂದೆ ಅತ್ತಿದ್ದಳು.
ಈಗ..
ಭಯಾನಕ ಸಾಲುಗಳು ಕಣ್ಮುಂದಿತ್ತು ಅದರ ಫಲಿತಾಂಶವೆಂಬಂತೆ.
          ನನಗಾಗ 24-25 ಆಸುಪಾಸು ಎಂದೂ ತಂಗಿಗೆ ಬೈದವನಲ್ಲ ನಾನು. ನನಗೆ ಎನು ಮಾಡಬೇಕೆಂದೆ ತೋಚಲಿಲ್ಲ. ಚೀಟಿಯನ್ನು ಅಲ್ಲೇ ಬಿಟ್ಟು ನಾನು ಹೊರ ಬಂದೆ. ತಲೆ ತಿರುಗಿದಂತಾಗುತ್ತಿತ್ತು. ಸಂಜೆ ತಂಗಿ ಬಂದಾಗ ಮನೆಯಲ್ಲಿ ಯಾರು ಇರಲಿಲ್ಲ. ನಿದಾನವಾಗಿ ತಂಗಿಯ ಬಳಿ ಅಮ್ಮ ನೋಡಿದ ಹುಡುಗನನ್ನೇ ಮದುವೆ ಆಗೆಂದೆ. ಅಂಗಾಲಾಚಿದೆ, ಬೇಡಿಕೊಂಡೆ. ಮೊದಲು ಆಕೆ ಮೌನವಾಗಿದ್ದಳು ನಂತರ ಒಪ್ಪಿಕೊಂಡಳು.
             ರಾತ್ರಿ ಅಮ್ಮನಿಗೆ ತಿಳಿಸಿದೆ ಅಮ್ಮನ ಖುಷಿಗೆ ಪದಗಳೇ ಇರಲಿಲ್ಲ. ನನಗೂ ನೆಮ್ಮದಿಯಾಯಿತು. ಅದಾದ 2 ದಿನದಲ್ಲೇ ಹುಡುಗ  ಹುಡುಗಿಯನ್ನು ನೋಡೋ ಶಾಸ್ತ್ರ ಮುಗಿದು 15 ದಿನದಲ್ಲೇ ಮದುವೆ ಮುಗಿಸಬೇಕೆಂದರು. ಹುಡುಗನ ತಾಯಿ ತೀರಿ ಹೋಗಿ 1 ವಷ9ದಲ್ಲೆ ಮದುವೆ ಮಾಡಬೇಕೆಂಬ ತುರಾತುರಿಯಲ್ಲಿದ್ದರು ಅವರು. ನಮಗೂ ಅದೇ ಬೇಕಾಗಿತ್ತು.
            ಅಮ್ಮ ಸಿಕ್ಕ ಕಡೆಯೆಲ್ಲ ಸಾಲ ಮಾಡಿದಳು. ಇದ್ದ ಸಲ್ಪ ಜಾಗವನ್ನು ಅಡುವಿಟ್ಟಳು. ಹಾಗೂ ಹೀಗೂ ಮದುವೆ ತಯಾರಿ ಮಾಡಿಯೇ ಬಿಟ್ಟಳು ಅಮ್ಮ ಸಂಭ್ರಮದಿಂದ. ತಂಗಿ ಮೌನವಾಗಿಯೆ ಇದ್ದಳು. ಮರುದಿನ ಮದುವೆ. 8-10 ಜನ ಸಂಬಂಧಿಕರು ಅಂದೇ ಬಂದಿದ್ದರು.  ಬೆಳಿಗ್ಗೆ ಬೇಗ ಏಳಬೇಕೆಂದು ಸ್ವಲ್ಪ ಬೇಗನೇ ಮಲಗಿದ್ದೆ ನಾನು, ಮನೆ ಗಿಜಿಗುಡುತ್ತದ್ದರು.

            ಬಾಗಿಲು ಬಡಬಡ ಸದ್ದು. ಹೊರಬಂದು ನೋಡಿದರೆ ಅಲ್ಲೇನಿತ್ತು? 
ರಕ್ತ ಚೆಲ್ಲಿತ್ತು, ತನಿ ರಕ್ತದ ವಾಸನೆ ಮಂದವಾಗಿ ಹರಡಿತ್ತು.
ಅಮ್ಮ ಸತ್ತ ಬಿದ್ದಿದ್ದಳು ಕೊರಳು ಕತ್ತರಿಸಿಕೊಂಡು.
ಹರಿತವಾದ ಕತ್ತಿಯೊಂದು ಪಕ್ಕದಲ್ಲೆ ಬಿದ್ದಿತ್ತು ರಕ್ತ ಕುಡಿದುಕೊಂಡು.
ತಂಗಿ ಮನೆಯಲ್ಲಿರಲಿಲ್ಲಅಪ್ಪನೂ..
ನನಗೆ ವಾಸ್ತವದ ಅರಿವಾಗಲಿಲ್ಲ. ತುಂಬ ಸಮಯ..
ನಿದಾನಕ್ಕೆ ಅರಿವಿಗೆ ಬಂತು..
           ತಂಗಿ ತನ್ನವನೊಂದಿಗೆ ಊರುಬಿಟ್ಟಿದ್ದಳು. ಮಗಳು ಮನೆಯಲ್ಲಿಲ್ಲದನ್ನು ಗಮನಿಸಿದ ಅಮ್ಮ ಅಪ್ಪನಿಗೆ ತಿಳಿಸಲು ಹೋಗಿದ್ದಳು. ಊರಿನಲ್ಲಿ ತಾನೊಬ್ಬ ವೇದಾಂತಿ ತಪಸ್ವಿಯಂತೆ ಮೆರೆಯುತ್ತಿದ್ದ ಅಪ್ಪ ತನ್ನ ತಪಶ್ಯಕ್ತಿಗೆ ಭಂಗವಾಯಿತೇನೋ ಎಂಬಂತೆ ಅಮ್ಮನ ಕೊರಳನ್ನು ಕಡಿದಿದ್ದ. ಬಲಿಗೆಂದೇ ಸಿದ್ದಪಡಿಸಿದ್ದ ಕತ್ತಿಯಲ್ಲಿ.
ಬದುಕು ಮಗ್ಗುಲು ಬದಲಿಸಿತ್ತು.
ಅಪ್ಪ ಜೈಲಿಗೆ ಹೋದ.
ವಿಚಾರಣೆಯಲ್ಲಿ ಗೊತ್ತಾಯಿತು.
 ಆತ ಕತ್ತಿ ಮಸೆದಿಟ್ಟು ಬರೆದಿಟ್ಟಿದ್ದ ವಾಕ್ಯವೆಂದು.
ಬಲಿ ಆಕೆಯಾಗಿರಲಿಲ್ಲಲ..
ಆತನಾಗಿದ್ದ..
 ಆನಂದ..
ಅಮ್ಮನ ಸಾವಿಗೆ ನಾನೇ ಕಾರಣ ಎನಿಸತೊಡಗಿತ್ತು. ಊರೆನ್ನುವುದೇ ಉರುಳ ಕುಣಿಕೆ ತರ ಕಾಣಿಸತೊಡಗಿತ್ತು.
ನನ್ನ ಕನಸಲ್ಲೂ ಒಬ್ಬಳು ಹುಡುಗಿದ್ದಳು
ಆಕೆ ಸುಮತಿ. ಕನಸು ಸತ್ತು ಹೋಗಿತ್ತು.. ಸುಮತಿಯ ನೆನಪೂ….
                                 *****
ಹೀಗೆ ಅಲೆಯುತ್ತಲೇ 40 ವರುಷ ಕಳೆದುಬಿಟ್ಟೆ. ಎನಾದೆ ನಾನು? ಉತ್ತರವಿಲ್ಲ ನನ್ನಲ್ಲಿ.. ಮತ್ತೆ ಇಂದು ಬಂದಿರುವೆ ಇದೇ ಊರಿಗೆ. ಜಗತ್ತು ತುಂಬ ಚಿಕ್ಕದು ಎನಿಸುತ್ತದೆ.. ಎಷ್ಟು ಅಲೆದರೂ ಮತ್ತೆ ಅಲ್ಲಿಗೆ ಬರುತ್ತಿದ್ದೇನೆ. ಮತ್ತೆ ಅದೇ ಜನ, ಅದೇ ರಸ್ತೆ, ಅದೇ ನೆನಪುಗಳು..
ಬೈರಾಗಿಯ ಮಾತು ಕೇಳಿ 20-30 ವಷ9ಗಳಾಗಿರಬಹುದು ಇನ್ನೂ ನನಗೆ ಉತ್ತರ ಸಿಕ್ಕಿಲ್ಲ ನಾನು ಮಾಡಿದ್ದು ತಪ್ಪಾ ಸರಿಯಾ?
ತಂಗಿಯನ್ನು ಉಳಿಸಲು ಹೋಗಿ ಅಮ್ಮನನ್ನು ಬಲಿ ಕೊಟ್ಟೆನಾ?
ನಾನು ನಿಜವಾಗಿಯೂ ಉಳಿಸಿದ್ದು ತಂಗಿಯನ್ನಾ? ಆನಂದನನ್ನಾ?
ಕಳೆದುಕೊಂಡಿದ್ದು?
ಉತ್ತರ ಸಿಗುತ್ತಿಲ್ಲ.
ಅಲ್ಲಿ ಬರುತ್ತಿರುವುದು ಸುಮತಿಯ ಮಗಳಿರಬೇಕು..
ಹಾಗೆ ಇದ್ದಾಳೆ...
ಮತ್ತೆ ಮತ್ತೆ ಅದೇ ಮುಖಗಳು...                 
              
                                        ****** ಗುರು *******